ಕಲಬುರಗಿ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಹೆಡ್ ಕಾನ್ಸ್ ಟೇಬಲ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
45 ವರ್ಷದ ಕಲ್ಯಾಣಿ ಗುಗ್ಗರಿ ಮೃತ ಪೊಲೀಸ್ ಸಿಬ್ಬಂದಿ. ಮೂಲತಃ ಕಲಬುರ್ಗಿಯ ಅಪಜಲಪುರ ತಾಲೂಕಿನ ಗೊಬ್ಬೂರು ಗ್ರಾಮದವರಾಗಿದ್ದ ಕಲ್ಯಾಣಿ ಅವರು ಕಲಬುರಗಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು.
ಗಣಪತಿ ಮೂರ್ತಿ ವಿಸರ್ಜನೆ ಬಳಿಕ ತಡ ರಾತ್ರಿ ಲಾಡ್ಜಿನ ತಮ್ಮ ರೂಮಿಗೆ ಬಂದು ಮಲಗಿದ್ದ ಕಲ್ಯಾಣಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮೊದಲೇ ಹೆಡ್ ಕಾನ್ಸ್ ಟೇಬಲ್ ಕೊನೆಯುಸಿರೆಳೆದಿದ್ದಾರೆ.