ಧಾರವಾಡ: ರಜಾದಿನಗಳನ್ನು ಕಳೆಯಲು ಅಜ್ಜಿ ಮನೆಗೆ ಬಂದಿದ್ದ ಬಾಲಕ ಬೀದಿ ನಾಯಿ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಧಾರವಾಡದ ದುಮ್ಮವಾಡ ಗ್ರಾಮದಲ್ಲಿ ನಡೆದಿದೆ.
11 ವರ್ಷದ ಪ್ರಥಮ ನೀರಲಕಟ್ಟಿ ಮೃತ ಬಾಲಕ. ರಜೆಗೆಂದು ಅಜ್ಜಿಯ ಮನೆಗೆ ಬಂದಿದ್ದ ಬಾಲಕ ತೋಟಕ್ಕೆ ಹೋಗುವಾಗ ನಾಯಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ.