ಕಲಬುರ್ಗಿ: ಕಾಲೇಜು ಪ್ರಾಂಶುಪಾಲರ ಮೇಲೆಯೇ ಸಹ ಪ್ರಾಧ್ಯಾಪಕ ಆಸಿಡ್ ದಾಳಿ ನಡೆಸಿ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರ್ಗಿಯ ಹೆಚ್ ಕೆ ಇ ಸೊಸೈಟಿ ಫಾರ್ಮಸಿ ಕಾಲೇಜಿನಲ್ಲಿ ನಡೆದಿದೆ.
ಮಾರ್ಚ್ 21ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಾ.ಅರುಣ್ ಕುಮಾರ್ ಹಲ್ಲೆಗೊಳಗಾದ ಪ್ರಾಂಶುಪಾಲರು. ಶಾಂತವೀರ ಆಸಿಡ್ ಎರಚಿ ಹಲ್ಲೆಗೆ ಯತ್ನಿಸಿದ್ದ ಸಹ ಪ್ರಾಧ್ಯಾಪಕ.
ಫಾರ್ಮಸಿ ಕಾಲೇಜಿನ ಪರಿವೀಕ್ಷಣಾ ಇನ್ಸ್ ಪೆಕ್ಟರ್ ಆಗಿ ಶಾಂತವೀರ ಅವರ ನೇಮಕಕ್ಕೆ ಪ್ರಾಂಶುಪಾಲರು ತಡೆಯೊಡ್ಡಿದ್ದಾರೆ ಎಂಬ ಅನುಮಾನ ಹಿನ್ನೆಲೆಯಲ್ಲಿ ಶಾಂತವೀರ, ಪ್ರಿನ್ಸಿಪಾಲ್ ಡಾ.ಅರುಣ್ ಕುಮಾರ್ ಮೇಲೆ ಆಸಿಡ್ ಎರಚಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಬ್ರಹ್ಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.