ಕೋಲಾರ: ಪ್ರಯಾಣಿಕನೊಬ್ಬನಿಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ಜಿಲ್ಲೆ ಮಾಲೂರಿನ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಪ್ಯಾಸೆಂಜರ್ ರೈಲು ತಾಂತ್ರಿಕ ದೋಷದಿಂದಾಗಿ ಮಾರ್ಗ ಮಧ್ಯೆಯೇ ನಿಂತಿತ್ತು. ರೈಲಿನಲ್ಲಿದ್ದ ಪ್ರಯಾಣಿಕರು ರೈಲನ್ನು ಇಳಿಯತೊಡಗಿದ್ದಾರೆ. ಈ ವೇಳೆ ಮತ್ತೊಂದು ರೈಲ್ವೆ ಟ್ರ್ಯಾಕ್ ನಿಂದ ಬಂದ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕನೊಬ್ಬನ ಮೇಲೆಯೇ ಹರಿದಿದೆ. ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿದೇಶದಲ್ಲಿ ಬಂಗಲೆ ಹೊಂದಿರೋ ಬಾಲಿವುಡ್ ಸ್ಟಾರ್ಸ್ ಯಾರೆಲ್ಲಾ ಗೊತ್ತಾ…?
ಪ್ಯಾಸೆಂಜರ್ ರೈಲು ಮಾರ್ಗಮಧ್ಯೆಯೇ ನಿಲ್ಲಲು ಸಿಗ್ನಲ್ ಸಮಸ್ಯೆ ಕಾರಣ ಎನ್ನಲಾಗಿದೆ. ಅವಘಡಕ್ಕೆ ಸ್ಟೇಷನ್ ಮಾಸ್ಟರ್ ನಿರ್ಲಕ್ಷವೇ ಕಾರಣ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.