ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳ ಮಾರಾಟ ದಂಧೆಯ ಗ್ಯಾಂಗ್ ಒಂದು ತಲೆ ಎತ್ತಿದ್ದು, ಬಡ ಮಕ್ಕಳನ್ನು ವಸ್ತುಗಳಂತೆ ಖರೀದಿ ಮಾಡಿ ಮಾರಾಟ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದೆ ಈ ಗುಂಪು.
ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ವಲಯ ಪೊಲೀಸರು ಮಕ್ಕಳ ಮಾರಾಟ ಗ್ಯಾಂಗ್ ನ್ನು ಹೆಡೆಮುರಿಕಟ್ಟಿದ್ದು, ಐದು ಆರೋಪಿಗಳನ್ನು ಬಂಧಿಸಿದ್ದಾರೆ. 13 ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
‘ಕೊರೊನಾ’ ಪೀಡಿತ ಗರ್ಭಿಣಿ ಜೀವನದಲ್ಲಿ ನಡೆದಿದೆ ಪವಾಡ..!
ದೇವಿಷಣ್ಮುಗಮ್, ಮಹೇಶ್ ಕುಮಾರ್, ಜನಾರ್ಧನ್, ರಂಜನಾ ದೇವಿ ಪ್ರಸಾದ್, ಧನಲಕ್ಷ್ಮಿ ಬಂಧಿತ ಆರೋಪಿಗಳು. ಮಕ್ಕಳಿಲ್ಲದ ಪೋಷಕರೇ ಈ ಗ್ಯಾಂಗ್ ನ ಟಾರ್ಗೆಟ್ ಆಗಿದ್ದು, ಬಡ ಮಕ್ಕಳನ್ನು ಕಡಿಮೆ ಹಣಕ್ಕೆ ಖರೀದಿಸಿ, ಬಳಿಕ 2-3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಬಸವನಗುಡಿ ಮಹಿಳಾ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ 11 ಮಕ್ಕಳನ್ನು ಈ ಗ್ಯಾಂಗ್ ಮಾರಾಟ ಮಾಡಿದೆ ಎಂಬುದು ಬೆಳಕಿಗೆ ಬಂದಿದೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಈ ಗ್ಯಾಂಗ್ ಸಕ್ರಿಯವಾಗಿತ್ತು ಎನ್ನಲಾಗಿದ್ದು, ತನಿಖೆ ಮುಂದುವರೆದಿದೆ.