alex Certify SHOCKING NEWS: ಪೊಲೀಸರೆಂದು ಬಂದು ನವವಧುವನ್ನೇ ಕಿಡ್ನಾಪ್ ಮಾಡಿದ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಪೊಲೀಸರೆಂದು ಬಂದು ನವವಧುವನ್ನೇ ಕಿಡ್ನಾಪ್ ಮಾಡಿದ ಪೋಷಕರು

ಬೆಂಗಳೂರು; ಮನೆಯವರ ವಿರೋಧದ ನಡುವೆಯೂ ವಿವಾಹವಾಗಿ ಪತಿಯೊಂದಿಗೆ ವಾಸವಾಗಿದ್ದ ನವವಧುವನ್ನು ಪೋಷಕರೇ ಕಿಡ್ನಾಪ್ ಮಾಡಿರುವ ಘಟನೆ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ಬೆಳಕಿಗೆ ಬಂದಿದೆ.

ನೆಲಮಂಗಲದ ವೀರಸಾಗರ ನಿವಾಸಿಗಳಾದ ಗಂಗಾಧರ್ ಹಾಗೂ ಜಲಜ ಮೇ 25ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮದುವೆ ಬಳಿಕ ವರನ ಅಕ್ಕನ ಮನೆಯಲ್ಲಿ ನವಜೋಡಿ ವಾಸವಾಗಿದ್ದರು. ನಿನ್ನೆ ರಾತ್ರಿ 20 ಜನರ ಗುಂಪೊಂದು ಬ್ಯಾಡರಹಳ್ಳಿ ಪೊಲೀಸರು ಎಂದು ಹೇಳಿಕೊಂಡು ಮನೆ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದವರನ್ನು ಥಳಿಸಿ ನವವಧುವನ್ನು ಅಪಹರಿಸಿದ್ದಾರೆ.

BIG NEWS: ಮಹಾಮಾರಿಗೆ ಮೊದಲ ಬಲಿ; ಮಂಕಿಪಾಕ್ಸ್‌ಗೆ ವ್ಯಕ್ತಿ ಸಾವು

ವಧುವಿನ ತಂದೆ ದೇವರಾಜು, ಸಂಬಂಧಿಕರಾದ ಮಹೇಶ್, ಸುರೇಶ್ ಸೇರಿದಂತೆ 20 ಜನರು ಪೊಲೀಸರ ಹೆಸರಲ್ಲಿ ದಾಳಿ ನಡೆಸಿ ಜಲಜಾಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ವರ ಗಂಗಾಧರ್ ಹಾಗೂ ಆತನ ಸಹೋದರಿ ಸಾಕಮ್ಮ ಆರೋಪಿಸಿದ್ದಾರೆ.

ಜಲಜಾ ಪೋಷಕರು ತಾವು ಎಲ್ಲರೂ ಸಂಬಂಧಿಕರೇ ಆಗಿದ್ದು, ಒಂದೇ ಊರಿನವರಾಗಿದ್ದೇವೆ. ಕೆಲ ವರ್ಷಗಳಿಂದ ಜಲಜಾ, ನಾನು ಪ್ರೀತಿಸುತ್ತಿದ್ದೆವು. ಆದರೆ ಆಕೆ ಮನೆಯಲ್ಲಿ ಇಷ್ಟವಿರಲಿಲ್ಲ. ಜಲಜಾ ಮದುವೆಯಾಗುವಂತೆ ಹಠ ಹಿಡಿದಿದ್ದಳು. ಮೇ 25ರಂದು ದೇವಸ್ಥಾನದಲ್ಲಿ ಮದುವೆಯಾಗಿದ್ದೆವು. ಆದರೆ ಈಗ ಆಕೆಯ ಪೋಷಕರೇ ಅವಳನ್ನು ಕಿಡ್ನಾಪ್ ಮಾಡಿದ್ದಾರೆ. ಜಲಜಾಳನ್ನು ಎಲ್ಲಿಗೆ ಕರೆದೊಯ್ದಿದ್ದಾರೆ ಎಂಬುದೂ ಗೊತಾಗುತ್ತಿಲ್ಲ ಎಂದು ಗಂಗಾಧರ ತಿಳಿಸಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...