ಬೆಳಗಾವಿ: ನಡುರಸ್ತೆಯಲ್ಲಿ ಸಾರ್ವಜನಿಕರ ಎದುರೇ ಪತಿ ಮಹಾಶಯನೊಬ್ಬ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘೋರ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಹೀನಾ ಕೌಸರ್ (24) ಕೊಲೆಯಾದ ಮಹಿಳೆ. 4 ವರ್ಷಗಳ ಹಿಂದೆ 34 ವರ್ಷದ ಮಂಜೂರ್ ಎಂಬಾತನನ್ನು ಹೀನಾ ಕೌಸರ್ ವಿವಾಹವಾಗಿದ್ದರು. ಪತಿ ಕಿರುಕುಳ, ಕೌಟುಂಬಿಕ ಕಲಹಕ್ಕೆ ಬೇಸತ್ತು 8 ತಿಂಗಳ ಹಿಂದೆ ವಿಚ್ಛೇದನಕ್ಕಾಗಿ ಹೀನಾ ಅರ್ಜಿ ಸಲ್ಲಿಸಿದ್ದರು.
ಈ ತರಕಾರಿ ಸಿಪ್ಪೆಯಿಂದ ಕಪ್ಪಗಾಗುತ್ತೆ ಬಿಳಿ ಕೂದಲು..!
ಆದರೆ ವಿಚ್ಛೇದನ ನೀಡದಂತೆ ಮಂಜೂರ್ ಕೇಳಿಕೊಂಡಿದ್ದ. ಆದರೆ ಹೀನಾ ಒಪ್ಪಿರಲಿಲ್ಲ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಇದೇ ಕಾರಣಕ್ಕೆ ಇಂದು ಕೋರ್ಟ್ ನಿಂದ ಪತ್ನಿ ವಾಪಸ್ ಆಗುತ್ತಿರುವುದನ್ನೇ ಕಾದು ರಸ್ತೆಯಲ್ಲಿಯೇ ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಹೀನಾ ಆಸ್ಪತ್ರೆಗೆ ದಾಖಲಾಗುವ ಮೊದಲೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.