ಬೆಂಗಳೂರು: ಕಿರುತೆರೆಯ ಖ್ಯಾತ ನಟಿಯೊಬ್ಬರು ತನ್ನ ಪತಿಯ ವಿರುದ್ಧ ಮದುವೆಗೂ ಮುನ್ನವೇ ಅತ್ಯಾಚಾರ ನಡೆಸಿದ ಆರೋಪ ಮಾಡಿದ್ದು, ಆರೋಪಿ ಪತಿ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಹೊರಗಡೆ ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿ ಮನೆಗೆ ಬರುವಂತೆ ಕರೆಸಿಕೊಂಡಿದ್ದ ವರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಮದುವೆ ಬಳಿಕ ಎಲ್ಲವೂ ಸರಿಹೋಗುತ್ತೆ ಎಂದು ನಂಬಿಸಿ ಬಲವಂತದಿಂದ ಮದುವೆಯಾಗಿದ್ದಾರೆ. ಮದುವೆ ಬಳಿಕ ಪತಿ ಮನೆಯವರು ಹಾಗೂ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಜಾತಿ ನಿಂದನೆ ಮಾಡುತ್ತಿದ್ದಾರೆ ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದಾರೆ.
ಈ ಕೆಲಸ ಮಾಡಲು ಮುಂದಾಗಿದ್ದಾರೆ ಒಬ್ಬನೇ ಬಾಯ್ ಫ್ರೆಂಡ್ ನಿಂದ ಮೋಸ ಹೋದ ಮೂರು ಹುಡುಗಿಯರು…!
ನಟಿಯ ದೂರಿನ ಆಧಾರದ ಮೇಲೆ ಆರೋಪಿ ಪತಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿ ಪತಿ ಹಾಗೂ ಆತನ ಮನೆಯವರನ್ನು ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.