ತುಮಕೂರು: ಮಧುಗಿರಿ ಉಪತಹಶೀಲ್ದಾರ್ ಓರ್ವರ ತಂದೆ-ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹಾಲೇಳನಹಳ್ಳಿಯಲ್ಲಿ ನಡೆದಿದೆ.
ಉಪತಹಶೀಲ್ದಾರ್ ಶಿವರುದ್ರಯ್ಯ ಅವರ ತಂದೆ ಶಿವಣ್ಣ (78), ತಾಯಿ ಸಿದ್ದಲಿಂಗಮ್ಮ (73) ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿ. ಕಳೆದ ಎರಡು ದಿನಗಳಿಂದ ದಂಪತಿ ಮನೆಯಿಂದ ಹೊರಬಂದಿರಲಿಲ್ಲ. ಅಕ್ಕಪಕ್ಕದ ಮನೆಯವರು ಕಿಟಕಿ ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಕೊಳದೊಳಕ್ಕೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಶ್ವಾನ
ವೃದ್ದ ದಂಪತಿ ಆತ್ಮಹತ್ಯೆಗೆ ಸಾಲದ ಹೊರೆ ಕಾರಣ ಎನ್ನಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.