ಜೈಪುರ: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಗೆ ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಜೈಪುರದ ಶ್ಯಾಮ್ ನಗರದಲ್ಲಿ ನಡೆದಿದೆ.
ಒಂಭತ್ತು ದಿನಗಳ ಹಿಂದೆ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಹೊರ ವಲಯದಲ್ಲಿ ಐವರು ಕಾಮುಕರು ತನ್ನನ್ನು ಬಲವಂತದಿದ ಎಳೆದೊಯ್ದು ಡ್ರಗ್ಸ್ ನೀಡಿ ಗ್ಯಾಂಗ್ ರೇಪ್ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ಶ್ಯಾಮ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಬೀಗ ಒಡೆದು ಮನೆಯೊಳಗೆ ಹೋದ ಪತಿಗೆ ಬಿಗ್ ಶಾಕ್
ಸಂತ್ರಸ್ತ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಸಾನಿಟೇಶನ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದಳು. ಅತ್ಯಾಚಾರ ನಡೆಸಿದ ಓರ್ವ ಆರೋಪಿ ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿದ್ದ. ವ್ಯಕ್ತಿ ತನ್ನನ್ನು ಶ್ಯಾಮ್ ನಗರದ ರಿಂಗ್ ರಸ್ತೆ ಬಳಿ ಕರೆದೊಯ್ದು ಬಳಿಕ ಅಲ್ಲಿ ನಾಲ್ವರನ್ನು ಕರೆಸಿ ಡ್ರಗ್ಸ್ ನೀಡಿ ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಮೋಹನ್ ಮೀನಾ ತಿಳಿಸಿದ್ದಾರೆ.