ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಚು ರೂಪಿಸಿದ್ದರು ಎನ್ನಲಾದ ವಿಡಿಯೋ ಬಹಿರಂಗವಾಗಿದ್ದು, ಸಂಚುಕೋರರು ಯಾವೆಲ್ಲ ರೀತಿ ಪ್ಲಾನ್ ಮಾಡಿದ್ದರು ಎಂಬ ಅಂಶ ಬಯಲಾಗಿದೆ.
ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ತಮ್ಮ ಮನೆಯಲ್ಲಿಯೇ ಕುಳ್ಳದೇವರಾಜ್ ನನ್ನು ಕರೆಸಿಕೊಂಡು ಎಸ್.ಆರ್. ವಿಶ್ವನಾಥ್ ರನ್ನು ತೋಟದ ಮನೆಯಲ್ಲಿಯೇ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಇಬ್ಬರ ನಡುವಿನ ಸಂಭಾಷಣೆಯಲ್ಲಿ ಬಹಿರಂಗವಾಗಿದೆ.
ಎಸ್.ಆರ್. ವಿಶ್ವನಾಥ್ ತೋಟದ ಮನೆಗೆ ಬರುತ್ತಾರೆ. ಬೆಳಿಗ್ಗೆ 6-7:30ರವರೆಗೆ ಒಬ್ಬನೇ ಇರ್ತಾನೆ. ಮೊದಲು ಒಂದೆರಡು ದಿನ ವಾತಾವರಣ ನೋಡಬೇಕು. ಆ ನಂತರ ಮುಗಿಸಬೇಕು ಎಂದು ಗೋಪಾಲಕೃಷ್ಣ, ದೇವರಾಜ್ ಗೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದೇವರಾಜ್ ಪಾಂಡಿಚೇರಿ ಮೂಲದವರನ್ನು ಕರೆಸಲಾಗಿದೆ. ಅವರನ್ನು ನಿಭಾಯಿಸೋಕೆ ಪ್ರತಿದಿನ 5 ಸಾವಿರ ಹಣ ಬೇಕು. ಹಣ ಕೊಡಿ… ಬೆಳಿಗ್ಗೆ 2 ಪಲ್ಸರ್ ಬೈಕ್ ನಲ್ಲಿ ತೋಟದ ಮನೆಗೆ ಕಳಿಸಿದ್ದೆ. ಅವರಿಗೆ ಎಂಎಲ್ಎ ಅಂತಾ ಗೊತ್ತಿಲ್ಲ. ರಿಯಲ್ ಎಸ್ಟೇಟ್ ನವನು ಅಂತ ಹೇಳಿದ್ದೇನೆ ಎಂದಿದ್ದಾನೆ….. ಹೀಗೆ ಹತ್ಯೆಗೆ ಯಾವ ರೀತಿ ಸಂಚು ರೂಪಿಸಲಾಗಿತ್ತು ಎಂಬುದು ಕೂಡ ಸ್ವತ: ಸಂಚುಕೋರರ ಸಂಭಾಷಣೆಯಿಂದಲೇ ಗೊತ್ತಾಗಿದ್ದು ಈ ಕುರಿತ ವಿಡಿಯೋ ವೈರಲ್ ಆಗಿದೆ.