ಬೆಂಗಳೂರು: ಸ್ವಂತ ತಂದೆಯೇ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಶಾಕಿಂಗ್ ಘಟನೆ ಬೆಂಗಳೂರಿನ ಕೋಡಿಗೆಹಳ್ಳಿಯಲ್ಲಿ ನಡೆದಿದೆ.
ಕೋಡಿಗೆಹಳ್ಳಿಯ ಧನಲಕ್ಷ್ಮೀ ಲೇಔಟ್ ನಲ್ಲಿ ಘಟನೆ ನಡೆದಿದ್ದು, ತಂದೆ ರಮೇಶ್ ಮಗಳನ್ನು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ. 32 ವರ್ಷದ ಆಶಾ ಕೊಲೆಯಾದ ಮಗಳು.
ಮದುವೆ ಬಳಿಕ ಪತಿಯನ್ನು ಬಿಟ್ಟು ತವರು ಮನೆಯಲ್ಲಿಯೇ ಆಶಾ ಇದ್ದಳು. ಇದೇ ವಿಚಾರವಾಗಿ ಅಪ್ಪ-ಮಗಳ ಮಧ್ಯೆ ಜಗಳ ಆರಂಭವಾಗಿದೆ ಎನ್ನಲಾಗಿದೆ. ಜಗಳದ ವೇಳೆ ಕೋಪದ ಭರದಲ್ಲಿ ತಂದೆ, ಮಗಳ ತಲೆಯ ಮೇಲೆ ದೊಣ್ಣೆಯಿಂದ ಹೊಡೆದಿದ್ದಾನೆ. ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕೋಡಿಗೆಹಳ್ಳಿ ಪೊಲೀಸರು ಆರೋಪಿ ರಮೇಶ್ ನನ್ನು ಬಂಧಿಸಿದ್ದಾರೆ.