ವಿಜಯಪುರ: ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಡೆಲ್ಟಾ ರೂಪಾಂತರಿ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮೆರೆದಿದೆ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಈ ರೂಪಾಂತರಿ ಹೆಮ್ಮಾರಿಗೆ 280 ಜನ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಏಪ್ರಿಲ್ 15ರಿಂದ ಮೇ 15ರವರೆಗೆ ಒಂದೇ ತಿಂಗಳಲ್ಲಿ ಜಿಲ್ಲೆಯಲ್ಲಿ 280 ಜನರು ಡೆಲ್ಟಾ ರೂಪಾಂತರಿಗೆ ಸಾವನ್ನಪ್ಪಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಗರ್ಭಿಣಿಯರು, ಮಕ್ಕಳು, ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳ ಸ್ಯಾಂಪಲ್ ಸಂಗ್ರಹಿಸಿ ಜಿಲ್ಲಾಡಳಿತ ಬೆಂಗಳೂರಿನ ಮೆಡಿಕಲ್ ಕಾಲೇಜಿನ ವೈರಾಲಜಿ ಲ್ಯಾಬ್ ಗೆ ಕಳುಹಿಸಿತ್ತು.
BIG NEWS: ಮೂರನೇ ಅಲೆ ತಡೆಗೆ ಮತ್ತೆ ಕಠಿಣ ನಿಯಮ ಜಾರಿ ಸಾಧ್ಯತೆ
ಜುಲೈ ಕೊನೇ ವಾರದಲ್ಲಿ ಡೆಲ್ಟಾ ರೂಪಾಂತರಿಯ ಲ್ಯಾಬ್ ವರದಿ ಬಂದಿದ್ದು, 120 ಜನರ ಸ್ಯಾಂಪಲ್ ಪೈಕಿ 77 ಜನರಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ್ ತಿಳಿಸಿದ್ದಾರೆ. ಡೆಲ್ಟಾ ರೂಪಾಂತರಿ ಪ್ರಕರಣದಲ್ಲಿ ವಿಜಯಪುರ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದ್ದು, ಒಟ್ಟು 280 ಜನರು ಡೆಲ್ಟಾಗೆ ಬಲಿಯಾಗಿದ್ದಾರೆಯೇ ಎಂಬ ಶಂಕೆ ಆರಂಭವಾಗಿದೆ.