ಚಾಮರಾಜನಗರ: ಉಪನ್ಯಾಸಕಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನಲ್ಲಿ ನಡೆದಿದೆ.
26 ವರ್ಷದ ಚಂದನಾ ಆತ್ಮಹತ್ಯೆ ಮಾಡಿಕೊಂಡವರು. ಕಳೆದ 6 ತಿಂಗಳಿಂದ ಜೆ ಎಸ್ ಎಸ್ ಕಾಲೇಜು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಚಂದನಾ, ತನ್ನ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ ನೋಟ್ ಬರೆದಿಟ್ಟಿರುವ ಚಂದನಾ ತನ್ನ ಸಾವಿಗೆ ತಾನೇ ಕಾರಣ ಎಂದು ಉಲ್ಲೇಖಿಸಿದ್ದಾಳೆ. ಇಂದು ಬೆಳಿಗ್ಗೆ ಚಂದನಾ ತಂದೆ ಆಕೆಗೆ ಫೋನ್ ಮಾಡಿದಾಗ ಎಷ್ಟು ಹೊತ್ತಾದರೂ ಫೋನ್ ರಿಸೀವ್ ಮಾಡಿಲ್ಲ, ಕೆಲ ಸಮಯದ ಬಳಿಕ ಚಂದನಾ ಆತ್ಮಹತ್ಯೆಗೆ ಶರಣಾಗಿರುವ ವಿಷಯ ಗೊತ್ತಾಗಿದೆ ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.
ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.