ಬೆಂಗಳೂರು: ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಸಾವಿನ ಕಾರಣ ಬಹಿರಂಗವಾಗಿದೆ.
ಇತ್ತೀಚೆಗೆ ಬೈಯಪ್ಪನಹಳ್ಳಿ ಜಿಮ್ ನಲ್ಲಿ 35 ವರ್ಷದ ಮಹಿಳೆ ವಿನಯಾ ವರ್ಕೌಟ್ ಮಾಡುವ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇದೀಗ ಸಿ.ವಿ.ರಾಮನ್ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆ ವರದಿ ನೀಡಿದ್ದು, ಮೆದುಳಿನ ರಕ್ತನಾಳ ಛಿದ್ರಗೊಂಡ ಪರಿಣಾಮ ಸೆರೆಬ್ರಲ್ ಹೆಮರೇಜ್ ಆಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೆದುಳಿನಲ್ಲಿ ಒತ್ತಡದಿಂದಾಗಿ ರಕ್ತನಾಳಗಳು ಒಡೆದು ಮಹಿಳೆ ಸಾವನ್ನಪ್ಪಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುವ ವೇಳೆ ಭಾರವಾದ ವಸ್ತುಗಳನ್ನು ಲಿಫ್ಟ್ ಮಾಡಿದ್ದಾರೆ. ಇದರಿಂದ ರಕ್ತದ ಒತ್ತಡ ಉಂಟಾಗಿ ಮೆದುಳಿನಲ್ಲಿ ಬ್ಲಡ್ ಪ್ರೆಶರ್ ಹೆಚ್ಚಾಗಿ ರಕ್ತನಾಳ ಛಿದ್ರಗೊಂಡು ರಕ್ತಸ್ರಾವವಾಗಿ ಕೋಮಾಗೆ ಹೋಗಿದ್ದಾರೆ. ಬಳಿಕ ಸಾವನ್ನಪ್ಪಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ ತಿಳಿಸಿದ್ದಾರೆ.