ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿಗೆ ವ್ಯಕ್ತಿಯ ಎರಡೂ ಕಾಲುಗಳು ಸಿಲುಕಿ ಛಿದ್ರಗೊಂಡ ಘಟನೆ ಹುಬ್ಬಳ್ಳಿ ಕಿಮ್ಸ್ ಹಿಂಭಾಗದ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ನಡೆದಿದೆ.
ಹುಬ್ಬಳ್ಳಿಯ ಹೆಗ್ಗೇರಿ ನಿವಾಸಿ ರೈಲಿನ ಹಳಿಗಳ ಮೇಲೆ ನಿಂತಿದ್ದ. ಶಾಲಿಮಾರ್-ವಾಸ್ಕೋಡಿಗಾಮ ರೈಲು ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಟಿದೆ. ಹಳಿಗಳ ಮೇಲೆ ವ್ಯಕ್ತಿ ನಿಂತಿರುವುದನ್ನು ಗಮನಿಸಿ ಲೋಕೋ ಪೈಲೆಟ್ ಹಾರ್ನ್ ಮಾಡಿದ್ದಾರೆ. ಆದರೂ ವ್ಯಕ್ತಿ ಹಳಿಯ ಮೇಲಿಂದ ಕದಲಿಲ್ಲ. ತಕ್ಷಣ ಎಚ್ಚೆತ್ತ ರೈಲು ಸಿಬ್ಬಂದಿ ರೈಲನ್ನು ನಿಲ್ಲಿಸಿದ್ದಾರೆ. ಆದರೆ ಎಂಜೀನ್ ಹಾಗೂ ಮೂರ್ನಾಲ್ಕು ಬೋಗಿಗಳು ವ್ಯಕ್ತಿಯ ಕಾಲಿನ ಮೇಲೆ ಹರಿದ ಪರಿಣಾಮ ಎರಡೂ ಕಾಲುಗಳು ತುಂಡಾಗಿವೆ.
ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.