ಇಂಗ್ಲೆಂಡ್: ಭಾರತದಲ್ಲಿ ಪತ್ತೆಯಾದ ಡೆಲ್ಟಾ ಪ್ರಭೇದದ ವೈರಾಣು ಇದೀಗ ವಿಶ್ವಾದ್ಯಂತ ಶಾಕ್ ನೀಡುತ್ತಿದ್ದು, ಕೊರೊನಾ ರೂಪಾಂತರಿ ಹೊಸ ವೈರಾಣು ಅಟ್ಟಹಾಸಕ್ಕೆ ಇಂಗ್ಲೆಂಡ್ ನಲುಗಿದೆ.
ಕೊರೊನಾ ರೂಪಾಂತರಿ ತಳಿ ಡೆಲ್ಟಾ ಪ್ಲಸ್ ವೈರಸ್ ಗೆ ಇಂಗ್ಲೆಂಡ್ ನಲ್ಲಿ 42 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿಯೂ ಶೇ.29ರಷ್ಟು ಜನರು 2 ಡೋಸ್ ಲಸಿಕೆ ಪಡೆದವರೆ ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಕೋವಿಡ್ ಲಸಿಕೆ ಪಡೆದರೂ ಕೂಡ ಡೆಲ್ಟಾ ಪ್ಲಸ್ ಅಪಾಯ ತಪ್ಪಿದ್ದಲ್ಲ ಎಂಬ ಆತಂಕ ಎದುರಾಗಿದೆ.
ಡೆಲ್ಟಾ ಪ್ಲಸ್ ವಿಶ್ವಾದ್ಯಂತ ಕರಾಳ ರೂಪ ಪ್ರದರ್ಶಿಸುತ್ತಿದ್ದು, ಈಗಾಗಲೇ ಭಾರತದಲ್ಲಿ ಕೂಡ 40ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.