ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿ ಚಲೋ ನಡೆಸಿದ್ದು, ವಿಧಾನಮಂಡಲ ಅಧಿವೇಶನಕ್ಕೆ ಎತ್ತಿನಗಾಡಿಯಲ್ಲಿ ಆಗಮಿಸಿದ್ದಾರೆ. ಈ ವೇಳೆ ಅವಘಡವೊಂದು ಸಂಭವಿಸಿದೆ.
ವಿಧಾನಸೌಧಕ್ಕೆ ಎತ್ತಿನ ಗಾಡಿಗಳಲ್ಲಿ ಬಂದ ಕಾಂಗ್ರೆಸ್ ನಾಯಕರನ್ನು ತಡೆದ ಪೊಲೀಸರೊಂದಿಗೆ ಕೈ ನಾಯಕರು ವಾಗ್ವಾದಕ್ಕಿಳಿದಿದ್ದಾರೆ. ವಿಧಾನಸೌಧ ಆವರಣಕ್ಕೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡದಿದ್ದಾಗ ಸ್ಥಳದಲ್ಲಿ ಗಲಾಟೆ, ಘರ್ಷಣೆಗಳು ನಡೆದಿವೆ.
ದ್ವಿಚಕ್ರ ವಾಹನ ಖರೀದಿಸುವವರಿಗೆ ಭರ್ಜರಿ ಗುಡ್ ನ್ಯೂಸ್: ಈ ಕಂಪನಿ ನೀಡ್ತಿದೆ ಶೇ.100 ರಷ್ಟು ಸಾಲ
ವಿಧಾನಸೌಧದ ಗೇಟ್ ಒಳಗೆ ಎತ್ತಿನಗಾಡಿ ಸಮೇತ ಪ್ರವೇಶಿಸಲು ಮುಂದಾದಾಗ ಒಂದೆಡೆ ಎತ್ತುಗಳನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ಎತ್ತುಗಳು ಬೆದರಿದ್ದು, ಎತ್ತಿನಗಾಡಿಯಲ್ಲಿ ನಿಂತಿದ್ದ ಕಾಂಗ್ರೆಸ್ ಶಾಸಕರಾದ ವೆಂಕಟರಮಣಯ್ಯ ಹಾಗೂ ಸಂಗಮೇಶ್ ಸೇರಿದಂತೆ ಇತರರು ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.