ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಖಾತೆ ಸಹಾಯಕ ಸಚಿವ ರಾಮೇಶ್ವರ್ ತೆಲಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪರದೆಯ ಮೇಲೆ ನೀಲಿಚಿತ್ರ ಪ್ರಸಾರವಾದ ಆಘಾತಕಾರಿ ಘಟನೆ ನಡೆದಿದೆ.
ದೇಶದ ಪ್ರಮುಖ ತೈಲ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಂಪನಿ ಗುವಾಹಟಿಯ ತಿನ್ಸುಕಿಯಾದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ಒಂದು ಅಚಾತುರ್ಯ ಸಂಭವಿಸಿದೆ ಎನ್ನಲಾಗಿದೆ.
4-5 ಸೆಕೆಂಡ್ ಗಳ ಕಾಲ ಪರದೆ ಮೇಲೆ ನೀಲಿಚಿತ್ರ ಪ್ರದರ್ಶನವಾಗಿದ್ದು, ಇದರಿಂದಾಗಿ ಕೇಂದ್ರ ಸಚಿವರು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಮುಜುಗರಕ್ಕೊಳಗಾಗಿದ್ದಾರೆ.
ಇದೀಗ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೂ ಆದೇಶಿಸಲಾಗಿದೆ. ಜೊತೆಗೆ ಪ್ರಾಜೆಕ್ಟ್ ಆಪರೇಟರ್ ನನ್ನ ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.