ಧಾರವಾಡ: ಕುಡಿದುಬಂದು ಗಲಾಟೆ ಮಾಡಿ ಹಿಂಸಿಸುತ್ತಿದ್ದ ಪತಿಯ ಕಾಟಕ್ಕೆ ಬೇಸತ್ತ ಮಹಿಳಾ ಮೋರ್ಚಾ ಅಧ್ಯಕ್ಷೆಯೊಬ್ಬರು ಗಂಡನನ್ನೇ ಕೊಲೆ ಮಾಡಿರುವ ಘಟನೆ ಧಾರವಾಡದ ಮರೆವಾಡ ಗ್ರಾಮದಲ್ಲಿ ನಡೆದಿದೆ.
ಧಾರವಾಡ ಗ್ರಾಮೀಣ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಅಮರಗೋಳ ಪತಿಯನ್ನು ಹತ್ಯೆ ಮಾಡಿರುವ ಆರೋಪಿ. ಈರಣ್ಣ ಕೊಲೆಯಾದ ದುರ್ದೈವಿ.
ಕಂಠಪೂರ್ತಿ ಕುಡಿದು ಬಂದು ಈರಣ್ಣ ಪ್ರತಿದಿನ ಪತ್ನಿ ಶೋಭಾ ಹಾಗೂ ಮಗಳ ಜತೆ ಗಲಾಟೆ ಮಾಡುತ್ತಿದ್ದ, ಇದರಿಂದ ಬೇಸತ್ತ ಶೋಭಾ ಹಾಗೂ ಮಗಳು ಇಬ್ಬರೂ ಈರಣ್ಣನ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಈರಣ್ಣನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಾರ್ಚ್ 16ರಂದು ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ: ಗೋವಾ ಸಿಎಂ ಆಗಿ ಸಾವಂತ್ ಮುಂದುವರಿಕೆ ಸಾಧ್ಯತೆ
ಆದರೆ ಚಿಕಿತ್ಸೆ ಫಲಿಸದೇ ಇದೀಗ ಈರಣ್ಣ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.