ಚಿತ್ರದುರ್ಗ: ನಾಲ್ಕು ವರ್ಷದ ಮಗುವಿಗೆ ವಿಷವುಣಿಸಿದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.
ವಕೀಲ ಪತಿಯ ಕಿರುಕುಳಕ್ಕೆ ಬೇಸತ್ತ ತಾಯಿ ವನೀತಾ ನಾಲ್ಕು ವರ್ಷದ ಮಗನಿಗೆ ವಿಷಕೊಟ್ಟು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರೂ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮಗು ಚಾರ್ವಿನ್ ಸಾವನ್ನಪ್ಪಿದ್ದು, ತಾಯಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.
ಕೈತುಂಬ ಗಳಿಸಲು ಇಲ್ಲಿದೆ ಅವಕಾಶ..! ಕೇವಲ 10 ಸಾವಿರದೊಳಗೆ ಮನೆಯಲ್ಲೇ ಕುಳಿತು ಶುರು ಮಾಡಿ ಈ ವ್ಯವಹಾರ
ಪತಿ ಲೋಕೇಶ್ ವಕೀಲನಾಗಿದ್ದು, ಪತ್ನಿಗೆ ಕಿರುಕುಳ ನಿಡುತ್ತಿದ್ದ ಎನ್ನಲಾಗಿದೆ. ಮನನೊಂದ ಪತ್ನಿ ಮಗುವಿಗೂ ವಿಷವುಣಿಸಿ ತಾನೂ ವಿಷಕುಡಿದು ಬಳಿಕ ತವರುಮನೆ ಕೋಡಿಹಳ್ಳಿ ಗ್ರಾಮಕ್ಕೆ ತೆರಳಲು ತಯಾರಾಗಿದ್ದರು. ಇದೇ ವೇಳೆ ತೀವ್ರ ಅಸ್ವಸ್ಥನಾಗಿ ಬಿದ್ದ ಮಗನನ್ನು ತಾಯಿಯೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪುತ್ತಿದ್ದಂತೆ ತಾಯಿಯೂ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.