ಮೈಸೂರು: ಕೊರೊನಾ ಎರಡನೇ ಅಲೆಯಲ್ಲಿ ಹಲವಾರು ವೈಸರ್ ಗಳು ರಾಜ್ಯವವನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ಮಹಾರಾಷ್ಟ್ರ, ಕೇರಳದ ಬಳಿಕ ಕರ್ನಾಟಕಕ್ಕೂ ಡೆಲ್ಟಾ ಪ್ಲಸ್ ವೈರಸ್ ಕಾಲಿಟ್ಟಿದೆ.
ಕೊರೊನಾದಿಂದ ಗುಣಮುಖರಾದವರಿಗೂ ಹಾಗೂ ಲಸಿಕೆ ಪಡೆದವರಲ್ಲಿಯೂ ಡೆಲ್ಟಾ ಪ್ಲಸ್ ಅಟ್ಯಾಕ್ ಆಗುತ್ತೆ. ಆದರೆ ಇತರೆ ರೂಪಾಂತರಿ ತಳಿಗಳಿಗಿಂತ ವೇಗವಾಗಿ ಈ ವೈರಸ್ ಹರಡುವುದಿಲ್ಲ. ಆದರೆ ವ್ಯಾಕ್ಸಿನ್ ನೀಡುವ ರೋಗ ನಿರೋಧಕ ಶಕ್ತಿಯನ್ನು ಮೀರುತ್ತದೆ ಎಂದು ತಿಳಿದುಬಂದಿದೆ.
ಕೊರೊನಾದ ರೂಪಾಂತರಿ ರೋಗವಾಗಿರುವ ಡೆಲ್ಟಾ ಫ್ಲಸ್, ಇದೀಗ ಮೈಸೂರಿನಲ್ಲಿ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಎನ್ ಸಿ ಬಿ ಎಸ್ ನಡೆಸಿದ ಜೀನೋಮಿಕ್ ಸೀಕ್ವೆನ್ಸಿಂಗ್ ನಲ್ಲಿ ಡೆಲ್ಟಾ ಫಸ್ ರೂಪಾಂತರಿ ತಳಿ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.