ಬೆಂಗಳೂರು: ಒಮಿಕ್ರಾನ್ ಪತ್ತೆಯಾಗಿದ್ದ ಆಫ್ರಿಕನ್ ಪ್ರಜೆ ಪರಾರಿ ವಿಚಾರಕ್ಕೆ ಸಂಬಂಧಿಸಿದಂತೆ ಆಫ್ರಿಕನ್ ಪ್ರಜೆ ಹಾಗೂ ಶಾಂಗ್ರಿಲಾ ಹೊಟೆಲ್ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಒಮಿಕ್ರಾನ್ ಪತ್ತೆಯಾಗಿದ್ದ ಸೋಂಕಿತ ಆಫ್ರಿಕನ್ ಪ್ರಜೆ ಪರಾರಿಯಾಗಿದ್ದ ಬಗ್ಗೆ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ನವೀನ್, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ಹಾಗೂ ಆತ ತಂಗಿದ್ದ ಶಾಂಗ್ರಿಲಾ ಹೋಟೆಲ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ…..! ಈ ಪ್ಲಾನ್ ನಲ್ಲಿ ಪ್ರತಿ ದಿನ ಸಿಗಲಿದೆ 1 ಜಿಬಿ ಡೇಟಾ
ನ.20ರಂದು ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಪ್ರಜೆಗೆ ಟೆಸ್ಟ್ ವೇಳೆ ಕೋವಿಡ್ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಂಗ್ರಿಲಾ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದರು. ಆದರೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ನ.27ರಂದು ದುಬೈಗೆ ತೆರಳಿದ್ದ. ವ್ಯಕ್ತಿ ಭಾರತ ತೊರೆದ ಬಳಿಕ ಆತನಲ್ಲಿ ಒಮಿಕ್ರಾನ್ ದೃಢವಾಗಿತ್ತು. ವ್ಯಕ್ತಿಯ ಚೆಕ್ ಔಟ್ ಬಗ್ಗೆ ಬಿಬಿಎಪಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ಮಾಡಿದ್ದ ಹಿನ್ನೆಲೆಯಲ್ಲಿ ಹೋಟೆಲ್ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.