ರಾಮನಗರ: ಇದ್ದಕ್ಕಿದ್ದಂತೆ ಕಾರು ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೋರ್ವರು ಸಜೀವ ದಹನಗೊಂಡಿರುವ ಘಟನೆ ರಾಮನಗರ ಜಿಲ್ಲೆ ಮರಳೆ ಗ್ರಾಮದಲ್ಲಿ ನಡೆದಿದೆ.
ಸ್ಫೋಟದ ತೀವ್ರತೆಗೆ ಕಾರಿನಲ್ಲಿದ್ದ ವಸ್ತುಗಳು ಸುಮಾರು 50 ಮೀಟರ್ ದೂರಕ್ಕೆ ಸಿಡಿದು ಬಿದ್ದಿದ್ದು, ಕಾರಿನ ಭಾಗಗಳು ಚಲ್ಲಾಪಿಲ್ಲಿಯಾಗಿವೆ. ಕಾರು ಏಕಾಏಕಿ ಸ್ಫೋಟಗೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.
KA 51, P 3384 ನೋಂದಣಿ ಕಾರು ಇದಾಗಿದ್ದು, ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.