ಗದಗ: ವಿಚಾರಣಾಧೀನ ಖೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
19 ವರ್ಷದ ರಾಜು ಲಮಾಣಿ ಆತ್ಮಹತ್ಯೆಗೆ ಶರಣಾದ ಖೈದಿ. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ ರಾಜು ಪಿಯು ಕಾಲೇಜಿನಲ್ಲಿ ಓದುತ್ತಿದ್ದ. ರಾಜು ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ರಾಜು ಜೈಲು ಪಾಲಾಗಿದ್ದ.
ಇದೀಗ ಏಕಾಏಕಿ ಜೈಲಿನಲ್ಲಿಯೇ ರಾಜು ಆತ್ಮಹತ್ಯೆಗೆ ಶರಣಾಗಿದ್ದು, ಜೈಲು ಸಿಬ್ಬಂದಿಯ ನಿರ್ಲಕ್ಷವೇ ಆತ್ಮಹತ್ಯೆಗೆ ಕಾರಣ ಎಂದು ರಾಜು ಪೋಷಕರು ಆರೋಪಿಸಿದ್ದಾರೆ.