ಬೆಂಗಳೂರು : ಬೆಂಗಳೂರಲ್ಲಿ ಹೊಸ ವರ್ಷದ ದಿನ ವಿದೇಶಿ ಪ್ರಜೆ ಪುಂಡಾಟ ಮೆರೆದಿದ್ದು, ಕಾನ್ಸ್ಟೇಬಲ್ ಗೆ ಚಾಕು ಇರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗೋವಿಂದಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್ ಟೇಬಲ್ ನಾಗರಾಜ್ ಭೀಮಪ್ಪ ಎಂಬುವವರ ಮೇಲೆ ವಿದೇಶಿ ಪ್ರಜೆ ಕೆಲ್ವಿನ್ ಎಂಬಾತ ಚಾಕು ಇರಿದಿದ್ದು, ನಾಗರಾಜ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜ.1 ರ ಮಧ್ಯರಾತ್ರಿ 1:35 ರ ಸುಮಾರಿಗೆ ಈ ಘಟನೆ ನಡೆದಿದೆ. ಹೊಸ ವರ್ಷದ ದಿನ ಕೆಲ್ವಿನ್ ಯುವತಿ ಜೊತೆ ಬಂದಿದ್ದನು. ರಸ್ತೆಯಲ್ಲಿ ಕಿರುಚಾಡುತ್ತಾ ಹ್ಯಾಪಿ ನ್ಯೂಯರ್ ಎಂದು ಕೂಗುತ್ತಿದ್ದನು.ಇದನ್ನು ಪ್ರಶ್ನಿಸಿದ ಪಿಸಿ ನಾಗರಾಜ್ ಗೆ ಆತ ಚಾಕು ಇರಿದಿದ್ದಾನೆ. ಘಟನೆ ಸಂಬಂಧ ಕೆಲ್ವಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.