ಜೈ ಶ್ರೀ ರಾಮ್ ಹೇಳುವಂತೆ ಒತ್ತಾಯಿಸಿ ಕಿಡಿಗೇಡಿಗಳು ಅಪ್ರಾಪ್ತರಿಗೆ ಚಪ್ಪಲಿಯಿಂದ ಥಳಿಸಿದ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವಕನೊಬ್ಬ ಮೂವರು ಮಕ್ಕಳನ್ನು ಚಪ್ಪಲಿಯಿಂದ ಹೊಡೆದು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗಿದ್ದು, ಅವರಲ್ಲಿ ಒಬ್ಬರು ‘ಅಲ್ಲಾ’ ಎಂದು ಕೂಗಿದ ಕೂಡಲೇ ಆರೋಪಿಗಳು ಅವರನ್ನು ಬಲವಾಗಿ ಹೊಡೆಯಲು ಪ್ರಾರಂಭಿಸಿದರು.
ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯುವಕರು ಮೂವರು ಮಕ್ಕಳನ್ನು ಚಪ್ಪಲಿಯಿಂದ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ, ಇನ್ನೊಬ್ಬ ವ್ಯಕ್ತಿ ಈ ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾನೆ. ಭಯಭೀತರಾದ ಮಕ್ಕಳು ‘ಜೈ ಶ್ರೀ ರಾಮ್’ ಎಂದು ಕೂಗಲು ಪ್ರಾರಂಭಿಸಿದ್ದಾರೆ.
In India see in this video how much hatred against Muslims has entered their hearts.
This incident is from MP, Ratlam where these small terrorists are beating 3 Muslim children and forcing them to raise JSR slogans. pic.twitter.com/ph8cqnB0bq
— Al Faris Emirati (@Sheikhalfaris) December 5, 2024