alex Certify SHOCKING: ಮನೆಯಲ್ಲಿ ಒಂಟಿಯಾಗಿದ್ದ ಹುಡುಗಿ ಅಪಹರಿಸಿ ಮೂವರಿಂದ ಗ್ಯಾಂಗ್ ರೇಪ್, ಅಪ್ರಾಪ್ತೆಯಿಂದ ದುಡುಕಿನ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮನೆಯಲ್ಲಿ ಒಂಟಿಯಾಗಿದ್ದ ಹುಡುಗಿ ಅಪಹರಿಸಿ ಮೂವರಿಂದ ಗ್ಯಾಂಗ್ ರೇಪ್, ಅಪ್ರಾಪ್ತೆಯಿಂದ ದುಡುಕಿನ ನಿರ್ಧಾರ

ಚಾರ್ಖಿ ದಾದ್ರಿ: ಮೂವರು ಯುವಕರು ತನ್ನ ಮೇಲೆ ಅತ್ಯಾಚಾರ ಎಸಗಿದ ನಂತರ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪೊಲೀಸರ ಪ್ರಕಾರ, ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದವಳು ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ಓದುತ್ತಿದ್ದಳು. ಶುಕ್ರವಾರ, ಹುಡುಗಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ನುಗ್ಗಿ, ಅವಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದ್ದು, ಗಂಟೆಗಳ ನಂತರ ಆಕೆಯ ಮನೆಯ ಸೀಲಿಂಗ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬದ್ರಾದ ಸ್ಟೇಷನ್ ರೆಸಿಡೆನ್ಸ್ ಅಧಿಕಾರಿ ಇನ್ಸ್‌ ಪೆಕ್ಟರ್ ಚಂದರ್ ಶೇಖರ್ ಹೇಳಿದ್ದಾರೆ.

ಎಫ್‌ಐಆರ್‌ ನಲ್ಲಿ ಮೂವರು ಆರೋಪಿಗಳನ್ನು ಹೆಸರಿಸಲಾಗಿದೆ. ಪ್ರಮುಖ ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಶೇಖರ್ ತಿಳಿಸಿದ್ದಾರೆ.

ಬಾಲಕಿ ಮತ್ತು ಮೂವರು ಶಂಕಿತರು ಒಂದೇ ಪ್ರದೇಶದವರು. ಪ್ರಮುಖ ಶಂಕಿತ ಆಕೆಯ ನೆರೆಹೊರೆಯವನಾಗಿದ್ದಾನೆ ಎಂದು ಬದ್ರಾದ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್‌ಪಿ) ದೇಶ್ ರಾಜ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Оптическая иллюзия для тех, Звезда рок-сцены Коала в ловушке: сможете ли вы его найти за