ಪಾರ್ಕಿಂಗ್ ವಿವಾದಗಳಿಂದಾಗಿ ಜನರ ನಡುವೆ ಆಗಾಗ್ಗೆ ಜಗಳವಾಗುವುದನ್ನು ನಾವು ನೋಡಿರುತ್ತೇವೆ. ಇಬ್ಬರೂ ಸೇರಿ ಮಾತನಾಡಿದ್ರೆ ಈ ವಿವಾದವು ಬಗೆಹರಿಯುತ್ತದೆ. ಆದರೆ, ಪರಸ್ಪರ ನಿಂದನೆ ಅಥವಾ ಜಗಳ ಉಲ್ಬಣಿಸಿದ್ರೆ ಪೊಲೀಸರು ಮಧ್ಯ ಪ್ರವೇಶಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇದೀಗ ಅಮೆರಿಕಾದ ಫ್ಲೋರಿಡಾದ ವ್ಯಕ್ತಿಯೊಬ್ಬರು ಪಾರ್ಕಿಂಗ್ ವಿವಾದವನ್ನು ಮಾತುಕತೆಯಿಂದ ಬಗೆಹರಿಸುವ ಬದಲು, ಫ್ಲೇಮ್ ಥ್ರೋವರ್ ಅನ್ನು ಬಳಸಿದ್ದಾರೆಂದು ಆರೋಪಿಸಿದ ಬಳಿಕ ಆತನನ್ನು ಬಂಧಿಸಲಾಗಿದೆ.
ಆಂಡ್ರಾ ಅಬ್ರಾಮ್ಸ್ ಎಂಬ ವ್ಯಕ್ತಿಯು ಯುವಕರಿದ್ದ ಕಾರಿನ ಮೇಲೆ ಫ್ಲೇಮ್ ಥ್ರೋವರ್ ಅನ್ನು ಬಳಸಿದ್ದಾರೆ. ಈತ ಬಳಸಿರೋ ಎಕ್ಸ್ ಎಮ್42 ಲೈಟ್ ಫ್ಲೇಮ್‌ಥ್ರೋವರ್ 20 ಅಡಿಗಳಷ್ಟು ಬೆಂಕಿಯನ್ನು ಹಾರಿಸಬಲ್ಲದು
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ಕಾರಿನೊಳಗಿದ್ದ ಹದಿಹರೆಯದವರಲ್ಲಿ ಒಬ್ಬನ ತಾಯಿ ಅಬ್ರಾಮ್ಸ್ ಫ್ಲೇಮ್‌ಥ್ರೋವರ್ ತಮ್ಮ ಪ್ರದೇಶದಲ್ಲಿ ಸಾಮಾನ್ಯ ವೈಶಿಷ್ಟ್ಯವಾಗಿದೆ ಎಂದು ಹೇಳಿದ್ದಾರೆ. ಇಂತಹ ಘಟನೆಗಳು ಈ ಪ್ರದೇಶದಲ್ಲಿ ಸರ್ವೇ ಸಾಮಾನ್ಯವಾಗಿದೆ ಎಂದು ಕಾರಿನಲ್ಲಿದ್ದ ಯುವಕನೊಬ್ಬನ ತಾಯಿ ತಿಳಿಸಿದ್ದಾರೆ.