ಜೈಪುರ : ದಲಿತ ಅತ್ಯಾಚಾರ ಸಂತ್ರಸ್ತೆಗೆ ಗಾಯಗಳನ್ನು ತೋರಿಸಲು ಬಟ್ಟೆ ಬಿಚ್ಚುವಂತೆ ಹೇಳಿದ ಆರೋಪದ ಮೇಲೆ ರಾಜಸ್ಥಾನದ ಕರೌಲಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಗಾಯಗಳನ್ನು ನೋಡಲು ಹಿಂದೌನ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಮಾರ್ಚ್ 30 ರಂದು ದೂರು ದಾಖಲಿಸಿದ್ದಾರೆ ಎಂದು ಉಪ ಎಸ್ಪಿ (ಎಸ್ಟಿ-ಎಸ್ಸಿ) ಸೆಲ್ ಮೀನಾ ತಿಳಿಸಿದ್ದಾರೆ.
“ಸಂತ್ರಸ್ತೆ ಬಟ್ಟೆ ಬಿಚ್ಚಲು ನಿರಾಕರಿಸಿದ್ದು, ಮಾರ್ಚ್ 30 ರಂದು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ ನಂತರ, ಮ್ಯಾಜಿಸ್ಟ್ರೇಟ್ ವಿರುದ್ಧ ದೂರು ದಾಖಲಿಸಿದ್ದಾಳೆ. ವಿನಯಕ್ಕೆ ಧಕ್ಕೆ ತಂದ ಆರೋಪದಡಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೀನಾ ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ವಿರುದ್ಧ ಐಪಿಸಿ ಸೆಕ್ಷನ್ 345 (ಅಕ್ರಮ ಬಂಧನ) ಮತ್ತು ಎಸ್ಸಿ / ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ಪೊಲೀಸರ ಪ್ರಕಾರ, ಮಾರ್ಚ್ 19 ರಂದು ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಮತ್ತು ಈ ಮಾರ್ಚ್ 27 ರಂದು ಹಿಂದೌನ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.