ಗುವಾಂಗ್ಡಾಂಗ್: ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಶಿಶುವಿಹಾರದ ಮೇಲೆ ದುಷ್ಕರ್ಮಿಯೋರ್ವ ಸೋಮವಾರ ದಾಳಿ ನಡೆಸಿ ಆರು ಜನರನ್ನು ಹತ್ಯೆ ಮಾಡಿದ ಭೀಕರ ಘಟನೆ ವರದಿಯಾಗಿದೆ.
ಲಿಯಾನ್ಜಿಯಾಂಗ್ ಕೌಂಟಿಯಲ್ಲಿ ದಾಳಿ ನಡೆಸಿದ್ದು, ಲಿಯಾನ್ಜಿಯಾಂಗ್ ಮೂಲದ ಶಂಕಿತನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ಪ್ರಕರಣವನ್ನು “ಉದ್ದೇಶಪೂರ್ವಕ ಹಲ್ಲೆ” ಎಂದು ಹೇಳಿದ್ದು, ಈ ಸಂಬಂಧ 25 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮೃತಪಟ್ಟವರಲ್ಲಿ ಒಬ್ಬ ಶಿಕ್ಷಕ, ಇಬ್ಬರು ಪೋಷಕರು ಮತ್ತು ಮೂವರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ದಾಳಿಯಲ್ಲಿ ಒಬ್ಬ ವ್ಯಕ್ತಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ನಿರ್ದಿಷ್ಟವಾಗಿ ಶಾಲೆಗಳನ್ನು ಗುರಿಯಾಗಿಸಿಕೊಂಡು ಮಾರಣಾಂತಿಕ ದಾಳಿಗಳು ರಾಷ್ಟ್ರವ್ಯಾಪಿ ಸಂಭವಿಸುತ್ತಿದ್ದು, ಇದು ಶಾಲೆಗಳ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲು ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ.