ಹಾಸನ : ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದ್ದು, ವೃದ್ದನನ್ನು ತುಳಿದು ಕೊಂದ ಕಾಡಾನೆ ಮೃತದೇಹದ ಮೇಲೆ ಕಾಫಿಗಿಡ ಮುಚ್ಚಿಟ್ಟಿದೆ.
ಪುಟ್ಟಯ್ಯ (78) ಎಂಬ ವೃದ್ದ ಕಾಡಾನೆ ದಾಳಿಗೆ ಬಲಿಯಾಗಿದ್ದು, ನಿನ್ನೆ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ನಡೆಸಿದೆ.
ವೃದ್ದನನ್ನು ತುಳಿದು ಸಾಯಿಸಿದ ಆನೆ ಶವಕ್ಕೆ ಕಾಫಿ ಗಿಡ ಮುಚ್ಚಿ ಹೋಗಿದೆ. ಇಂದು ಬೆಳಗ್ಗೆ ಪುಟ್ಟಯ್ಯರ ಶವ ಪತ್ತೆಯಾಗಿದೆ.