ಕೊಪ್ಪಳ : ಪಾಪಿ ಪತಿಯೋರ್ವ ಗರ್ಭಿಣಿ ಪತ್ನಿಯನ್ನು ಕೊಂದು ಬಾವಿಗೆ ಎಸೆದ ಘಟನೆ ಕೊಪ್ಪಳದ ತಾಳಕನಪೂರದಲ್ಲಿ ನಡೆದಿದೆ.
ಸಂಗೀತಾ ಎಂಬ ಮಹಿಳೆ ಕೊಲೆಯಾಗಿದ್ದು, ಪತಿ ಬಾಬು ಎಂಬಾತ ಈ ಕೃತ್ಯ ಎಸಗಿದ್ದಾನೆ. 4 ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಸಂಗೀತಾಳನ್ನು ಬಾಬು ಜಮೀನಿಗೆ ಕರೆದೊಯ್ದು ಕೊಲೆ ಮಾಡಿ ನಂತರ ಬಾವಿಗೆ ಎಸೆದಿದ್ದಾನೆ. ಕೊಳೆದ ಸ್ಥಿತಿಯಲ್ಲಿ ಸಂಗೀತಾಳ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.