ನವದೆಹಲಿ: ಯಾತ್ರಾರ್ಥಿಗಳು ಸೇರಿದಂತೆ ಏಳು ಜನರನ್ನು ಹೊತ್ತ ಹೆಲಿಕಾಪ್ಟರ್ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಉತ್ತರಾಖಂಡದ ಕೇದಾರನಾಥದಲ್ಲಿ ಶುಕ್ರವಾರ (ಮೇ 24) ಮುಂಜಾನೆ ತುರ್ತು ಭೂಸ್ಪರ್ಶ ಮಾಡಿದೆ.
ಅಧಿಕಾರಿಯೊಬ್ಬರು, ಹಿಮಾಲಯನ್ ದೇವಾಲಯದ ಹೆಲಿಪ್ಯಾಡ್ನಿಂದ ಕೆಲವು ಮೀಟರ್ ದೂರದಲ್ಲಿ ಹೆಲಿಕಾಪ್ಟರ್ ಇಳಿಯಿತು ಎಂದು ಹೇಳಿದರು. ವಿಮಾನದಲ್ಲಿ ಒಬ್ಬ ಪೈಲಟ್ ಮತ್ತು ಆರು ಯಾತ್ರಿಕರು ಸೇರಿದಂತೆ ಏಳು ಜನರು ಇದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ತುರ್ತು ಭೂಸ್ಪರ್ಶದ ವೀಡಿಯೊದಲ್ಲಿ ಹೆಲಿಕಾಪ್ಟರ್ ನೆಲವನ್ನು ಸ್ಪರ್ಶಿಸುವ ಮೊದಲು ತಿರುಗುತ್ತಿರುವುದನ್ನು ನೋಡಬಹುದು. ಹೆಲಿಪ್ಯಾಡ್ ಬಳಿ ಜನರು ರಕ್ಷಣೆಗಾಗಿ ಪರದಾಡುತ್ತಿದ್ದಾರೆ. ಹೆಲಿಕಾಪ್ಟರ್ ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ.