ಚಾಮರಾಜನಗರ : ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸದ್ಯ ಭಾರಿ ಟೀಕೆಗೆ ಕಾರಣವಾಗಿದೆ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯೋರ್ವಳು ಪ್ರದರ್ಶಿಸಿದ ಮಾದರಿ ಚರ್ಚೆಗೆ ಕಾರಣವಾಗಿದೆ.
ಬುರ್ಖಾ ಧರಿಸಿದರೆ ಸತ್ತ ಮೇಲೆ ದೇಹಕ್ಕೆ ಏನೂ ಆಗುವುದಿಲ್ಲ, ನೇರ ಸ್ವರ್ಗಕ್ಕೆ ಹೋಗುತ್ತೀರಿ. ತುಂಡುಡುಗೆ ತೊಟ್ಟರೆ ನರಕಕ್ಕೆ ಹೋಗುತ್ತೀರಿ. ನಿಮ್ಮ ಸಮಾಧಿಯಲ್ಲಿರುವ ಮೃತ ದೇಹವನ್ನು ಹಾವು, ಚೇಳುಗಳು ತಿನ್ನುತ್ತದೆ ಎಂದು ವಿದ್ಯಾರ್ಥಿನಿ ವಸ್ತು ಪ್ರದರ್ಶನದ ಪಕ್ಕದಲ್ಲಿ ನಿಂತು ಭಾಷಣ ಮಾಡಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ . ಚಿಕ್ಕವಯಸ್ಸಿನಲ್ಲೇ ಮಕ್ಕಳನ್ನು ಬ್ರೈನ್ ವಾಶ್ ಮಾಡಲಾಗುತ್ತಿದೆಯಾ ಎಂಬ ಆರೋಪ ಕೇಳಿಬಂದಿದೆ.
ಈ ವಿಡಿಯೋ ಶಾಲೆಗಳಲ್ಲಿ ಏನನ್ನು ಕಲಿಸಲಾಗುತ್ತಿದೆ ಎಂಬ ಕರಾಳ ವಾಸ್ತವವನ್ನು ಬಹಿರಂಗಪಡಿಸಿದೆ. ವೈಜ್ಞಾನಿಕ ಮನೋಭಾವ, ವೈಚಾರಿಕ ಚಿಂತನೆ ಮತ್ತು ಕೋಮು ಸೌಹಾರ್ದತೆಯನ್ನು ಬೆಳೆಸುವ ಬದಲು, ಶಾಲೆಗಳು ಧಾರ್ಮಿಕ ಮೂಲಭೂತವಾದದ ಸಂತಾನೋತ್ಪತ್ತಿ ತಾಣಗಳಾಗುತ್ತಿವೆ. ಇದು ಶಿಕ್ಷಣವಲ್ಲ- ಇದು ಉಪದೇಶ. ಆದರೂ, ಇಂತಹ ವಿಭಜಕ ಸಿದ್ಧಾಂತದಿಂದ ಯುವ ಮನಸ್ಸುಗಳಿಗೆ ವಿಷವನ್ನು ನೀಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
The Reality of Congress Rule in Karnataka: Education or Systematic Brainwashing?
What are teachers and parents in Karnataka under the Congress government teaching their children? Is this the real purpose of the 4% reservation policy, or should we say this is the “best” use of… pic.twitter.com/Aiy4kaDWlS
— Karnataka Portfolio (@karnatakaportf) March 23, 2025