ಚಿಕ್ಕಬಳ್ಳಾಪುರ : ಕ್ಯಾಂಟರ್ ಹರಿದು ತಂದೆ ಎದುರೇ ಮಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ನಗರದ ಎಂಜಿ ರಸ್ತೆಯ ಅಂಭಾಭವಾನಿ ಹೋಟೆಲ್ ಬಳಿ ಘಟನೆ ನಡೆದಿದೆ. ಮೃತರನ್ನು ಯೋಗಿತಾ (22) ಎಂದು ಗುರುತಿಸಲಾಗಿದೆ.
ಮಗಳನ್ನು ತಂದೆ ಬೈಕ್ ನಲ್ಲಿ ಕಾಲೇಜಿಗೆ ಬಿಡುತ್ತಿದ್ದಾಗ ಕ್ಯಾಂಟರ್’ ಬೈಕ್ ಗೆ ಟಚ್ ಆಗಿದೆ. ಪರಿಣಾಮ ಬೈಕ್ ಕೆಳಗೆ ಬಿದ್ದು ಯೋಗಿತಾ ತಲೆಗೆ ಗಂಭೀರ ಗಾಯಗಳಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಂಟರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.