ಜಿಮ್’ ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತ ಸಂಭವಿಸಿ 28 ವರ್ಷದ ಖ್ಯಾತ ಬಾಡಿ ಬಿಲ್ಡರ್ ಮೃತಪಟ್ಟ ಘಟನೆ ನಡೆದಿದೆ.
ಬ್ರೆಜಿಲ್ ನ ಬಾಡಿಬಿಲ್ಡರ್ ಮತ್ತು ಫಿಟ್ ನೆಸ್ ಉದ್ಯಮಿ ಜೋಸ್ ಮ್ಯಾಟಿಯಸ್ ಕೊರಿಯಾ ಸಿಲ್ವಾ (28) ಬ್ರೆಸಿಲಿಯದ ಅಗುವಾಸ್ ಕ್ಲಾರಾಸ್ ನಲ್ಲಿರುವ ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಮೃತಪಟ್ಟಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಜೋಸ್ ದಕ್ಷಿಣ ಅಮೇರಿಕನ್ ಚಾಂಪಿಯನ್ ಶಿಪ್ ನಂತಹ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಹೆಸರುವಾಸಿಯಾಗಿದ್ದರು. ಜಿಮ್ ನಲ್ಲಿ ತನ್ನ ಸ್ನೇಹಿತರೊಂದಿಗೆ ವ್ಯಾಯಾಮ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದರು.ಅವರಿಗೆ ಕೂಡಲೇ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದರೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ.ಜಿಮ್ ತಾಲೀಮು ಮಾಡುತ್ತಿದ್ದ ಯುವ ಬಾಡಿಬಿಲ್ಡರ್ ಸಾವನ್ನಪ್ಪುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಸೆಪ್ಟೆಂಬರ್ನಲ್ಲಿ ಬ್ರೆಜಿಲ್ 19 ವರ್ಷದ ಬಾಡಿಬಿಲ್ಡರ್ ಹೃದಯಾಘಾತದಿಂದ ತನ್ನ ಮನೆಯಲ್ಲಿ ಮೃತಪಟ್ಟಿದ್ದರು.