ಬೆಂಗಳೂರು : ಇಡ್ಲಿ , ಹಸಿರು ಬಟಾಣಿ, ಕಲ್ಲಂಗಡಿ ಬೆನ್ನಲ್ಲೇ ಟೊಮೆಟೊ ಸಾಸ್ ನಲ್ಲೂ ಅಪಾಯಕಾರಿ ರಾಸಾಯನಿಕ ಬಳಕೆಯಾಗಿರುವುದನ್ನು ಆಹಾರ ಇಲಾಖೆ ವರದಿ ಧೃಡಪಡಿಸಿದೆ.
ಹೌದು, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಚಪ್ಪರಿಸಿ ಸವಿಯುವ ಟೊಮೆಟೋ ಸಾಸ್ ಗೆ ಅಪಾಯಕಾರಿ ರಾಸಾಯನಿಕ ಬಳಕೆಯಾಗುತ್ತಿರುವುದು ಆಹಾರ ಸುರಕ್ಷತಾ ಇಲಾಖೆಯಲ್ಲಿ ಧೃಡವಾಗಿದೆ.
ವಿವಿಧ ಆಹಾರ ಪದಾರ್ಥದಲ್ಲಿ ರಾಸಾಯನಿಕ ಬಳಕೆಯಾಗುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಟೊಮೆಟೋ ಸಾಸ್ ಸ್ಯಾಂಪಲ್ಸ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು, ಸದ್ಯ ವರದಿ ಅಧಿಕಾರಿಗಳ ಕೈ ಸೇರಿದ್ದು, ಟೊಮೆಟೋ ಸಾಸ್ ನಲ್ಲಿ ಅಪಾಯಕಾರಿ ರಾಸಾಯನಿಕ ಹಾಕಿರುವುದು ಧೃಡವಾಗಿದ್ದು,ಇದು ಕೂಡ ಅನ್ ಸೇಫ್ ಅಂತ ತಿಳಿಸಿದ್ದಾರೆ.