ಕಲುಷಿತ ನೀರಿನಲ್ಲಿ ಕಂಡುಬರುವ ಮುಕ್ತ-ಜೀವಂತ ಅಮೀಬಾದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕಾದ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ನ ಮತ್ತೊಂದು ಪ್ರಕರಣವನ್ನು ಕೇರಳ ವರದಿ ಮಾಡಿದೆ,. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ತಲುಪಿದೆ.
ವರದಿಯ ಪ್ರಕಾರ, ರೋಗಿಯು ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪಯ್ಯೋಲಿ ನಿವಾಸಿ 14 ವರ್ಷದ ಬಾಲಕನಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೇ ತಿಂಗಳಿನಿಂದ ರಾಜ್ಯದಲ್ಲಿ ಇಂತಹ ನಾಲ್ಕು ಪ್ರಕರಣಗಳು ವರದಿಯಾಗಿವೆ ಮತ್ತು ಎಲ್ಲಾ ರೋಗಿಗಳು ಅಪ್ರಾಪ್ತ ವಯಸ್ಕರು ಎಂದು ವರದಿಯಾಗಿದೆ, ಅವರಲ್ಲಿ ಮೂವರು ಈಗಾಗಲೇ ಸಾವನ್ನಪ್ಪಿದ್ದಾರೆ.
ಕಲುಷಿತ ನೀರಿನಲ್ಲಿ ಮೆದುಳು ತಿನ್ನುವ ಅಮೀಬಾ ಇರುತ್ತದೆ. ಇದು ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಪ್ರವೇಶಿಸುತ್ತದೆ ಮತ್ತು ನಿಧಾನವಾಗಿ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅದಕ್ಕಾಗಿಯೇ ಇದನ್ನು ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ. ಈ ರೋಗದಿಂದ ಸೋಂಕಿಗೆ ಒಳಗಾದವರಿಗೆ ಮೊದಲು ಹೆಚ್ಚಿನ ಜ್ವರ ಬರುತ್ತದೆ.ಅಲ್ಲದೇ ಅಸಹನೀಯ ತಲೆನೋವಿನೊಂದಿಗೆ ವಾಂತಿ ಸಂಭವಿಸಬಹುದು. ತಕ್ಷಣ ಚಿಕಿತ್ಸೆ ನೀಡದಿದ್ದರೆ ಸಾವಿನ ಅಪಾಯವಿದೆ.