ವಿಶಾಖಪಟ್ಟಣದಲ್ಲಿ ನವವಧು ವಸಂತ ಆತ್ಮಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ಆಕೆಯ ಪತಿ ನಾಗೇಂದ್ರ ಬಾಬು, ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ನೂರಾರು ಪೋರ್ನ್ ವಿಡಿಯೊಗಳು ಪತ್ತೆಯಾಗಿವೆ.
ಇದರ ಜೊತೆಗೆ ಗೂಗಲ್ ಹಿಸ್ಟರಿಯನ್ನು ಪರಿಶೀಲಿಸಿದಾಗ, ನಾಗೇಂದ್ರ ಬಾಬು ಶೃಂಗಾರ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅನೇಕ ಔಷಧಿಗಳಿಗಾಗಿ ಹುಡುಕಿದ್ದು ತಿಳಿದುಬಂದಿದೆ. ಪೋರ್ನ್ ವಿಡಿಯೊಗಳಿಗೆ ದಾಸನಾಗಿದ್ದ ನಾಗೇಂದ್ರ ಬಾಬು, ಮದುವೆಯಾದ ತಿಂಗಳಿನಿಂದಲೇ ವಸಂತಳನ್ನು ಲೈಂಗಿಕವಾಗಿ ಕಿರುಕುಳಪಡಿಸಲು ಪ್ರಾರಂಭಿಸಿದ್ದ.
ವಯಾಗ್ರ ಬಳಸುತ್ತಾ, ಪೋರ್ನ್ ವಿಡಿಯೊಗಳನ್ನು ತೋರಿಸಿ ಹಾಗೆಯೇ ಮಾಡಬೇಕೆಂದು ವಸಂತಳನ್ನು ಪತಿ ಪೀಡಿಸುತ್ತಿದ್ದನೆಂದು ಆಕೆಯ ತಂದೆ – ತಾಯಿಗಳು ಹೇಳುತ್ತಿದ್ದಾರೆ. ಎಷ್ಟೇ ಬೇಡಿಕೊಂಡರೂ ಆತ ಕರುಣೆ ತೋರಲಿಲ್ಲ ಎಂದು ಬಂಧುಗಳು ತಿಳಿಸಿದ್ದಾರೆ.
ಆದರೆ ಆತ, ಸಂಸಾರ ನಡೆಸಲು ವಸಂತ ಸಹಕರಿಸುತ್ತಿಲ್ಲ ಎಂದು ಆಕೆಯ ಕುಟುಂಬ ಸದಸ್ಯರಿಗೆ ದೂರು ನೀಡುತ್ತಿದ್ದನೆಂದು ಹೇಳಿದ್ದಾರೆ. ನಾಗೇಂದ್ರ ಬಾಬುವನ್ನು ಕಠಿಣವಾಗಿ ಶಿಕ್ಷಿಸಬೇಕೆಂದು ವಸಂತ ಕುಟುಂಬವು ಆಗ್ರಹಿಸುತ್ತಿದೆ. ಪತಿಯ ಕಿರುಕುಳ ತಾಳಲಾರದೆ ವಸಂತ ಗುರುವಾರ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯಲ್ಲಿ ನಾಗೇಂದ್ರ ಬಾಬು ಮತ್ತು ಆತನ ತಂದೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ನಾಗೇಂದ್ರನ ತಾಯಿ ಮತ್ತು ತಮ್ಮ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.
ವಿಶಾಖಪಟ್ಟಣದ ಗೋಪಾಲಪಟ್ಟಣಂ ನಂದಮೂರಿ ಕಾಲೋನಿಯ ನಾಗೇಂದ್ರ ಬಾಬುಗೆ 11 ತಿಂಗಳ ಹಿಂದೆ ವಸಂತಳೊಂದಿಗೆ ಮದುವೆಯಾಗಿತ್ತು. ಕಾಮಪಿಶಾಚಿಯಾಗಿದ್ದ ನಾಗೇಂದ್ರ ಬಾಬು, ವಸಂತಳನ್ನು ಚಿತ್ರಹಿಂಸೆಗೊಳಪಡಿಸಲು ಪ್ರಾರಂಭಿಸಿದ. ಅಶ್ಲೀಲ ವಿಡಿಯೊಗಳನ್ನು ತೋರಿಸಿ ಕಿರುಕುಳ ನೀಡಿದ.
ಇದೇ ವಿಷಯವನ್ನು ಕುಟುಂಬ ಸದಸ್ಯರ ಬಳಿ ಹೇಳಿಕೊಂಡು ಹಲವು ಬಾರಿ ವಸಂತ ಗೋಳಾಡಿದ್ದಳು. ಪತಿ ಬದಲಾಗುತ್ತಾನೆಂದು ಕೆಲವು ದಿನಗಳ ಕಾಲ ಸಹಿಸಿಕೊಂಡಿದ್ದಳು. ಆದರೆ ಪತಿಯ ಕಾಮಪಿಶಾಚಿ ಕೃತ್ಯ ಹೆಚ್ಚಾದ ಕಾರಣ, ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ವಸಂತಳ ಕುಟುಂಬ ಸದಸ್ಯರು ಆರೋಪಿಸುತ್ತಿದ್ದಾರೆ. ಅತ್ತೆ, ಮಾವ, ಮೈದುನ ಮತ್ತು ಪತಿ ಸೇರಿ ವಸಂತಳನ್ನು ಕೊಂದಿದ್ದಾರೆಂದು ಅವರು ದೂರಿದ್ದಾರೆ.
ಈ ಪ್ರಕರಣದಲ್ಲಿ ನಾಗೇಂದ್ರ ಬಾಬುವನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಫೋನ್‌ನಲ್ಲಿ ಪೋರ್ನ್ ವಿಡಿಯೊಗಳು ಮತ್ತು ವಯಾಗ್ರ ಮಾತ್ರೆಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಸಂತಳದ್ದು ಕೊಲೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.