ಚಂಡೀಗಢ : ಪಂಜಾಬ್ ಪೊಲೀಸ್ ನಿವೃತ್ತ ಸಹಾಯಕ ಇನ್ಸ್ಪೆಕ್ಟರ್ ಜನರಲ್ (ಎಐಜಿ) ಮಾಲ್ವಿಂದರ್ ಸಿಂಗ್ ಸಿಧು ಅವರು ತಮ್ಮ ಅಳಿಯ ಹರ್ಪ್ರೀತ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದಿದೆ.
ಹರ್ಪ್ರೀತ್ ಕೃಷಿ ಇಲಾಖೆಯಲ್ಲಿ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಯಾಗಿದ್ದರು. ಮಧ್ಯಸ್ಥಿಕೆಗಾಗಿ ನ್ಯಾಯಾಲಯಕ್ಕೆ ಬಂದಿದ್ದ ಎರಡು ಕುಟುಂಬಗಳ ನಡುವೆ ನಡೆಯುತ್ತಿರುವ ಕೌಟುಂಬಿಕ ವಿವಾದದ ಮಧ್ಯೆ ಈ ಘಟನೆ ನಡೆದಿದೆ.
ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸಂತ್ರಸ್ತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ಸ್ಥಳದಲ್ಲಿದ್ದ ಜನರು ಅವನನ್ನು ಆಂಬ್ಯುಲೆನ್ಸ್ ಗೆ ಕರೆದೊಯ್ಯುತ್ತಿದ್ದಾರೆ ಎಂದು ವೀಡಿಯೊದಲ್ಲಿ ಕಾಣಬಹುದು. ಆದರೆ ಸಂತ್ರಸ್ತ ಬದುಕುಳಿಯಲಿಲ್ಲ , ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.