ಬ್ಯಾಂಕ್ ನಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು ನೌಕರ ಮೃತಪಟ್ಟಂತಹ ಘಟನೆಯ ಹಳೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ.
ಮೃತರನ್ನು ಉತ್ತರ ಪ್ರದೇಶದ ಬ್ಯಾಂಕ್ ನೌಕರ ರಾಜೇಶ್ ಕುಮಾರ್ ಶಿಂಧೆ (30) ಎಂದು ಗುರುತಿಸಲಾಗಿದೆ
ಕಚೇರಿಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಕುರ್ಚಿಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಯು ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತರನ್ನು ರಾಜೇಶ್ ಕುಮಾರ್ ಶಿಂಧೆ ಎಂದು ಗುರುತಿಸಲಾಗಿದ್ದು, ಇವರು ಮಹೋಬಾದ ಎಚ್ಡಿಎಫ್ಸಿ ಬ್ಯಾಂಕ್ ಶಾಖೆಯಲ್ಲಿ ಕೃಷಿ ಪ್ರಧಾನ ವ್ಯವಸ್ಥಾಪಕರಾಗಿದ್ದರು.
ರಾಜೇಶ್ ಕುಸಿದು ಬೀಳುತ್ತಿದ್ದಂತೆ ಸಹೋದ್ಯೋಗಿಗಳನ್ನು ಅವರನ್ನು ಎತ್ತುಕೊಂಡು ಹೋಗಿ ಮುಖಕ್ಕೆ ನೀರು ಚಿಮುಕಿಸಿದ್ದಾರೆ. ಆದರೆ ಅವರಿಗೆ ಹೃದಯಾಘಾತ ಆಗಿದೆ ಎಂದು ಯಾರಿಗೂ ತಿಳಿದಿರಲಿಲ್ಲ.ರಾಜೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
उत्तर प्रदेश : महोबा जिले के HDFC बैंक में मैनेजर राजेश शिंदे (38 वर्ष) की लैपटॉप पर काम करते–करते मौत हो गई। साथियों ने CPR दिया, लेकिन कुछ नहीं हुआ। pic.twitter.com/Xz2ItozDjj
— Sachin Gupta (@SachinGuptaUP) June 26, 2024