ರಾಮಾಯಣ ನಾಟಕದ ವೇಳೆ ವೇದಿಕೆ ಮೇಲೆ ರಾಕ್ಷಸ ಪಾತ್ರಧಾರಿಗಳು ಜೀವಂತ ಹಂದಿ ಕೊಂದು ಅದರ ಮಾಂಸ ತಿಂದ ಭಯಾನಕ ಘಟನೆ ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ರಾಮಾಯಣದಲ್ಲಿ ರಾಕ್ಷಸನ ಪಾತ್ರವನ್ನು ನಿರ್ವಹಿಸುತ್ತಿದ್ದ 45 ವರ್ಷದ ರಂಗಭೂಮಿ ನಟ ವೇದಿಕೆಯ ಮೇಲೆ ಜೀವಂತ ಹಂದಿಯ ಹೊಟ್ಟೆಯನ್ನು ಕತ್ತರಿಸಿ ಅದರ ಮಾಂಸವನ್ನು ತಿಂದಿದ್ದಾರೆ.
ಈ ಘಟನೆಯು ರಾಜ್ಯವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಸೋಮವಾರ ವಿಧಾನಸಭೆಯಲ್ಲಿ ಖಂಡಿಸಲಾಯಿತು. ನವೆಂಬರ್ 24 ರಂದು ಹಿಂಜಿಲಿ ಪೊಲೀಸ್ ಠಾಣೆ ಪ್ರದೇಶದ ರಾಲಾಬ್ ಗ್ರಾಮದಲ್ಲಿ ನಡೆದ ನಾಟಕದ ಸಂಘಟಕರಲ್ಲಿ ಒಬ್ಬರಾದ ಬಿಂಬಧರ್ ಗೌಡ ಅವರನ್ನು ಪ್ರಾಣಿಗಳ ಮೇಲಿನ ಕ್ರೌರ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಗಾಗಿ ಬಂಧಿಸಲಾಗಿದೆ.