ಝಾನ್ಸಿ: ಆಟೋ ಚಾಲಕನೊಬ್ಬ ಸಂಚಾರ ನಿಯಮಗಳನ್ನು ಉಲ್ಲಂಘಿಸಿ 19 ಪ್ರಯಾಣಿಕರನ್ನು ಆಟೋದಲ್ಲಿ ಕರೆದೊಯ್ದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಆಟೋದೊಳಗೆ 19 ಪ್ರಯಾಣಿಕರು ಇದ್ದಾರೆ ಎಂದು ತಿಳಿದ ಪೊಲೀಸರು ಶಾಕ್ ಆಗಿದ್ದಾರೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದ್ದು, ವೀಡಿಯೊ ವೈರಲ್ ಆಗಿದೆ.
ವೀಡಿಯೊದಲ್ಲಿ, ಪ್ರಯಾಣಿಕರು ಒಬ್ಬೊಬ್ಬರಾಗಿ ಆಟೋರಿಕ್ಷಾದಿಂದ ಹೊರಬರುತ್ತಿರುವುದನ್ನು ಕಾಣಬಹುದು. ನಂತರ, ಎಣಿಕೆಗಾಗಿ ಸಾಲಿನಲ್ಲಿ ನಿಲ್ಲುವಂತೆ ಪೊಲೀಸರು ಅವರನ್ನು ಕೇಳಿದರು, ಆಶ್ಚರ್ಯಕರವಾಗಿ ಆಟೋದಲ್ಲಿ 19 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂಬುದನ್ನು ಪೊಲೀಸರು ನೋಡಿ ಶಾಕ್ ಆಗಿದ್ದಾರೆ. ಈ ಘಟನೆಯನ್ನು ಝಾನ್ಸಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಆಟೋ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರದೇಶ ಅಧಿಕಾರಿ ತಹ್ರೌಲಿ ತಿಳಿಸಿದ್ದಾರೆ.
एक ऑटो में कुल 18 सवारी.. चालक को मिला लीजिए तो 19 लोग.. गजब हाल है..
झांसी पुलिस ने फिलहाल ऑटो सीज कर दिया है! pic.twitter.com/1uKB2dg1zB
— Devesh Pandey (@iamdevv23) February 17, 2025