ಕಿಬ್ಬೊಟ್ಟೆಯಲ್ಲಿ ತೀವ್ರ ನೋವೆಂದು ಬಂದಿದ್ದ ರೋಗಿಯೊಬ್ಬನ ಶುಶ್ರೂಷೆ ಮಾಡಿದ ಲಿಥುಯೇನಿಯಾ ವೈದ್ಯರಿಗೆ ಜೀವಮಾನದ ಶಾಕ್ ಒಂದು ಕಾದಿತ್ತು.
ಬಾಲ್ಟಿಕ್ ನಗರಿ ಕ್ಲೇಪೆಡಾದ ಆಸ್ಪತ್ರೆಯೊಂದಕ್ಕೆ ದಾಖಲಾದ ಈ ರೋಗಿಯ ಹೊಟ್ಟೆಯ ಎಕ್ಸ್-ರೇ ತೆಗೆದು ನೋಡಿದ ವೇಳೆ ಆತನ ಹೊಟ್ಟೆಯಲ್ಲಿ ಲೋಹದ ಅನೇಕ ತುಂಡುಗಳು ಇರುವುದು ಕಂಡು ಬಂದಿದೆ. ಕೆಲವೊಂದು ವಸ್ತುಗಳು 10 ಸೆಂ.ಮೀ.ನಷ್ಟು ಉದ್ದವಿದ್ದವು. ಕಳೆದ ಒಂದು ತಿಂಗಳಿಂದ ಈ ಎಲ್ಲಾ ವಸ್ತುಗಳನ್ನು ಆತ ನುಂಗಿದ್ದ.
ಮೂರು ಗಂಟೆಗಳ ಕಾಲ ನಾಜೂಕಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆ ಎಲ್ಲಾ ವಸ್ತುಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.