ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಅಡಿಯಲ್ಲಿ ಪೊಲೀಸರು ಈಗಲೂ ಪ್ರಕರಣ ದಾಖಲಿಸುತ್ತಿರೋದರ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ಮಾರ್ಚ್ 2015ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಯನ್ನು ತೆಗೆದು ಹಾಕಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಎ ಅಡಿಯಲ್ಲಿ ದೇಶಾದ್ಯಂತ ಪೊಲೀಸರೂ ಇನ್ನೂ ಪ್ರಕರಣಗಳನ್ನ ದಾಖಲಿಸುತ್ತಲೇ ಇರೋದು ನಿಜಕ್ಕೂ ಆಶ್ಚರ್ಯಕರ ಹಾಗೂ ದುಃಖಕರ ಸಂಗತಿಯಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಕೆ.ಎಂ. ಜೋಸೆಫ್ ಹಾಗೂ ಬಿ.ಆರ್. ಗವಾಯಿ ನೇತೃತ್ವದ ಪೀಠ ಹೇಳಿದೆ.
ಅರ್ಜಿದಾರ ಪರ ವಕೀಲರಾದ ಸಂಜಯ್ ಪರೀಖ್ ಸೆಕ್ಷನ್ 66 ಎಯನ್ನ ತೆಗೆದು ಹಾಕುವ ಮುನ್ನ ಈ ಸೆಕ್ಷನ್ ಅಡಿಯಲ್ಲಿ 687 ಪ್ರಕರಣಗಳು ದಾಖಲಾಗಿದ್ದವು. ಸೆಕ್ಷನ್ ತೆಗೆದು ಹಾಕಿದ ನಂತರ 1307 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ರು.
ಐಟಿ ಕಾಯ್ದೆಯ ಸೆಕ್ಷನ್ 66ಎ ಅನ್ನೋದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರಮಣಕಾರಿ ವಿಷಯನ್ನ ಪೋಸ್ಟ್ ಮಾಡುವವರ ಬಂಧನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ವಿವಾದಾತ್ಮಕ ಸೆಕ್ಷನ್ನ ಅಡಿಯಲ್ಲಿ ಆಕ್ರಮಣಕಾರಿ ಪೋಸ್ಟ್ಗಳನ್ನ ಶೇರ್ ಮಾಡಿದವರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಆಕ್ರಮಣಾಕಾರಿಯಾಗಿ ಟಿಪ್ಪಣಿಗಳನ್ನ ಬರೆದವರನ್ನ ಬಂಧಿಸಲು ವಿವಿಧ ರಾಜ್ಯಗಳ ಪೊಲೀಸರು ಈ ಸೆಕ್ಷನ್ನ್ನು ವ್ಯಾಪಕವಾಗಿ ದುರುಪಯೋಗ ಮಾಡಿಕೊಂಡಿದ್ದರು. ಈ ಸೆಕ್ಷನ್ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನ ಕಿತ್ತುಕೊಳ್ಳುತ್ತದೆ ಎಂದು ನ್ಯಾಯಪೀಠ ಹೇಳಿದೆ.