ಬೆಂಗಳೂರು : ಬೆಂಗಳೂರಲ್ಲಿ ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಕಾಮುಕ ಅಪ್ಪನ ಕೃತ್ಯಕ್ಕೆ ಬೇಸತ್ತು ಯುವತಿ ಮನೆಬಿಟ್ಟ ಘಟನೆ ವರದಿಯಾಗಿದೆ.
ಹೌದು, ರಕ್ಷಣೆ ಕೊಡಬೇಕಾದ ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಹೊಸಕೋಟೆ ನಗರದಲ್ಲಿ ನಡೆದಿದೆ. ಅಪ್ಪನ ಕಾಟಕ್ಕೆ ಬೇಸತ್ತ ಯುವತಿ ಪಿಜಿಯಲ್ಲಿ ಆಶ್ರಯ ಪಡೆದಿದ್ದಾಳೆ.
19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಮಂಜುನಾಥ್ ಯಾರಿಗೂ ವಿಚಾರ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಅಪ್ಪನ ನೀಚ ಕೃತ್ಯಕ್ಕೆ ಬೇಸತ್ತ ಯುವತಿ ಪಿಜಿಯಲ್ಲಿ ಆಶ್ರಯ ಪಡೆದಿದ್ದಾಳೆ. ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಮಂಜುನಾಥ್ ಗೆ 3 ಜನ ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳ ಮೇಲೆ ತಂದೆಯ ಕಾಮದ ಕಣ್ಣು ಬಿದ್ದಿದೆ. ತಂದೆಯ ಕಾಟ ತಾಳಲಾರದೇ ಯುವತಿ ಪಿಜಿಯಲ್ಲಿ ಆಶ್ರಯ ಪಡೆದು ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.