alex Certify SHOCKING : ರಾಜ್ಯದಲ್ಲಿ ಕಾಮುಕರ ‘ಕೀಚಕ ಕೃತ್ಯ’ ; ಪಬ್ ನಲ್ಲೇ ಯುವತಿಯ ಮೇಲೆ ‘ಮಾನಭಂಗ’ಕ್ಕೆ ಯತ್ನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ರಾಜ್ಯದಲ್ಲಿ ಕಾಮುಕರ ‘ಕೀಚಕ ಕೃತ್ಯ’ ; ಪಬ್ ನಲ್ಲೇ ಯುವತಿಯ ಮೇಲೆ ‘ಮಾನಭಂಗ’ಕ್ಕೆ ಯತ್ನ..!

ಮಂಗಳೂರು : ರಾಜ್ಯದಲ್ಲಿ ಕಾಮುಕರು ಕೀಚಕ ಕೃತ್ಯ ಎಸಗಿದ್ದು, ಪಬ್ ನಲ್ಲೇ ಯುವತಿಯ ಮೇಲೆ ಮಾನಭಂಗಕ್ಕೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಶೆರ್ ಲಾಕ್ ಪಬ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಪುತ್ತೂರಿನ ನಾಲ್ವರು ಯುವಕರನ್ನು ಬಂಧಿಸಲಾಗಿದೆ.

ಸುಮಾರು 22 ವರ್ಷದ ಯುವತಿ ತನ್ನ ಸ್ನೇಹಿತೆ ಜೊತೆ ಮಂಗಳೂರಿನಲ್ಲಿರುವ ಪಾಂಡೇಶ್ವರ ಪೊರಮ್ ಮಾಲ್ ನಲ್ಲಿರುವ ಪಬ್ ಗೆ ಹೋಗಿದ್ದರು. ರಾತ್ರಿ 10:30 ರ ವೇಳೆಗೆ ಕಾಮುಕರು ಯುವತಿಯ ಎದೆ ಹಾಗೂ ಇನ್ನಿತರ ಭಾಗ ಸ್ಪರ್ಶಿಸಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಸಂತ್ರಸ್ತ ಯುವತಿ ಮಂಗಳೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...