ಬೆಂಗಳೂರು : ಕರಿದ ಹಸಿರು ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಧೃಡಪಡಿಸಿದೆ.
ಬಟಾಣಿಯಲ್ಲಿ ಬಳಕೆ ಮಾಡುವ ಕೃತಕ ಟಾರ್ಟಾಜಿನ್ ಬಣ್ಣದಿಂದ ಕ್ಯಾನ್ಸರ್ ಬರುತ್ತದೆ. ಇದು ಸೇವಿಸುವುದು ಅಪಾಯಕಾರಿ.96 ಮಾದರಿಯಲ್ಲಿ 64 ಮಾದರಿ ಅಸುರಕ್ಷಿತ ಎಂದು ವರದಿ ತಿಳಿಸಿದೆ.
ಇಡ್ಲಿ ತಯಾರಿಸಲು ಬಳಸುವ ಪ್ಲಾಸ್ಟಿಕ್ ನಿಂದ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಬೆನ್ನಲ್ಲೇ ಹಸಿರು ಬಟಾಣಿ ಬಗ್ಗೆ ಆಹಾರ ಇಲಾಖೆ ವರದಿ ನೀಡಿದೆ.ಕರಿದ ಹಸಿರು ಬಟಾಣಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ವರದಿ ನೀಡಿದೆ. ಹಸಿರು ಬಟಾಣಿಗೆ ನಿಷೇಧಿತ ಬಣ್ಣವನ್ನು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಎಚ್ಚೆತ್ತ ಆಹಾರ ಇಲಾಖೆ ಸ್ಯಾಂಪಲ್ಸ್ ಗಳನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದ್ದು, ಕ್ಯಾನ್ಸರ್ ಕಾರಕ ಬಣ್ಣ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ.