ಇಂದೋರ್: ಇಂದೋರ್ ನ ಶಿವ ದೇವಾಲಯದೊಳಗೆ ಮುಸ್ಲಿಂ ವ್ಯಕ್ತಿಯೊಬ್ಬ ಭಕ್ತರು ಮತ್ತು ಮಹಿಳೆಯರಿಗೆ ಅಶ್ಲೀಲ ವರ್ತನೆ ತೋರಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ದೇವಾಲಯಕ್ಕೆ ಬಂದಿದ್ದ ಭಕ್ತರ ದೂರಿನ ಮೇರೆಗೆ ವ್ಯಕ್ತಿಯನ್ನು ಬಂಧಿಸಲಾಯಿತು. ಆರೋಪಿಯನ್ನು ವಾಸಿಂ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿರುವ ವಿಡಿಯೋವೊಂದರ ಪ್ರಕಾರ, ವಾಸಿಂ ದೇವಸ್ಥಾನದ ಒಳಗೆ ಕುಳಿತಿರುವಾಗ ಭಕ್ತರಿಗೆ ತನ್ನ ಖಾಸಗಿ ಅಂಗಗಳನ್ನು ತೋರಿಸಲು ಮುಂದಾಗಿ ಅಶ್ಲೀಲವಾಗಿ ವರ್ತರಿಸಿದ್ದಾನೆ. ಪ್ರಕಾಶ್ ನಗರದ ವಿಶ್ವೇಶ್ವರ ಮಹಾದೇವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ಮಾಹಿತಿ ಪಡೆದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕಾಶ್ ನಗರದ ದೇವಸ್ಥಾನದಲ್ಲಿ ವ್ಯಕ್ತಿಯೋರ್ವ ಅಶ್ಲೀಲ ಕೃತ್ಯ ಎಸಗಿರುವ ಬಗ್ಗೆ ನಿನ್ನೆ ನಮಗೆ ಮಾಹಿತಿ ಲಭಿಸಿತ್ತು. ತನಿಖೆ ಕೈಗೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಪೊಲೀಸರ ಬಳಿ ಲಭ್ಯವಿರುವ ಇತರೆ ವಿಧಾನಗಳ ಮೂಲಕ ತನಿಖೆ ನಡೆಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಸಂಯೋಗಿತಾ ಗಂಜ್ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಟಿ. ಖಾಜಿ ಹೇಳಿದ್ದಾರೆ.
ಆರೋಪಿಯು ಮಾದಕ ವ್ಯಸನಿಯಾಗಿದ್ದಾನೆ. ನಶೆಯಲ್ಲಿದ್ದ ಆತ ಅನುಚಿತ ವರ್ತನೆ ತೋರಿದ್ದು, ಆತನ ಚಟುವಟಿಕೆಗಳ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದರು.